ಅಭಿಪ್ರಾಯ / ಸಲಹೆಗಳು

ಸಾಂಸ್ಥಿಕ ರಚನೆ

ಸಣ್ಣ ನೀರಾವರಿಯ ಫ್ರತಿಯೊಂದು ವಲಯದಲ್ಲಿ ಈ ಕೆಳಗಿನಂತೆ ವಿಭಾಗಗಳಿರುತ್ತವೆ.

 • ಆಡಳಿತ ವಿಭಾಗ
 • ಲೆಕ್ಕ ಪತ್ರ ವಿಭಾಗ
 • ತಾಂತ್ರಿಕ ವಿಭಾಗ
 • ವಿನ್ಯಾಸ ವಿಭಾಗ
 • ಅಂಕಿ-ಅಂಶ ವಿಭಾಗ

ಪ್ರತಿಯೊಂದು ವಿಭಾಗಗಳ ಕಾರ್ಯ ಚಟುವಟಿಕೆಗಳು ಈ ಕೆಳಗಿನಂತಿವೆ

ಆಡಳಿತಾತ್ಮಕ ವಿಭಾಗ

ದಕ್ಷಿಣ ವಿಭಾಗ

ಮುಖ್ಯ ಅಭಿಯಂತರರು ಸಣ್ಣ ನೀರಾವರಿ (ದಕ್ಷಿಣ) ವಲಯದ ಮುಖ್ಯಸ್ಥರಾಗಿದ್ದು, ಇವರಿಗೆ 676 ಉದ್ಯೋಗಿಗಳು ಸಹಾಯಕರಾಗಿದ್ದಾರೆ. ಈ ವಲಯಕ್ಕೆ ಒಟ್ಟು 837 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 60 ಮಂದಿ ‘ಎ’ ಶ್ರೇಣಿಯವರು, 161 ಮಂದಿ ‘ಬಿ’ ಶ್ರೇಣಿಯವರೂ, 358 ಮಂದಿ ‘ಸಿ’ ಶ್ರೇಣಿಯವರೂ, 175 ಮಂದಿ ‘ಡಿ’ ಶ್ರೇಣಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.

ಆಡಳಿತಾತ್ಮಕ ವಿಭಾಗವು ರಿಜಿಸ್ಟ್ರಾರ್ ಅವರ ನಿಯಂತ್ರಣದಲ್ಲಿದ್ದು, ಅವರು ಎಲ್ಲಾ ಆಡಳಿತಾತ್ಮಕ ವಿಚಾರಗಳು ಅಂದರೆ ಸೇವಾ ವಿಚಾರಗಳು, ವಿಮಾ ದಾಖಲೆಗೆಗಳ ನಿರ್ವಹಣೆ, ವರ್ಗಾವಣೆ, ಸ್ಟೇಷನರಿ ಖರೀದಿ, ವಿಚಾರಣೆ, ವಿದ್ಯುತ್ ಮತ್ತು ನೀರಿನ ಬಿಲ್ಲುಗಳ ಪಾವತಿ ಮತ್ತು ಗುತ್ತಿಗೆ ವಿಚಾರಗಳಲ್ಲಿ ವ್ಯವಹರಿಸುತ್ತಾರೆ.

ಸಣ್ಣ ನೀರಾವರಿ ದಕ್ಷಿಣ ವಲಯ ಮುಖ್ಯ ಅಭಿಯಂತರರ ಕಚೇರಿಯು ಮಾಹಿತಿ ಹಕ್ಕು ಕಾಯ್ದೆ-2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರವಾಗಿದೆ.

ಉತ್ತರ ವಲಯ

ಮುಖ್ಯ ಅಭಿಯಂತರರು ಸಣ್ಣ ನೀರಾವರಿ ಉತ್ತರ ವಲಯದ ಮುಖ್ಯಸ್ಥರಾಗಿರುತ್ತಾರೆ. ಇವರ ವ್ಯಾಪ್ತಿಗೆ ಮೀಸಲಾದ 945 ಹುದ್ದೆಗಳ ಪೈಕಿ 786 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ 58 ಮಂದಿ ‘ಎ’ ಶ್ರೇಣಿಯವರಾಗಿದ್ದು, 156 ಮಂದಿ ‘ಬಿ’ ಶ್ರೇಣಿ, 421 ಮಂದಿ ‘ಸಿ’ ಶ್ರೇಣಿಯವರು ಮತ್ತು 151 ಮಂದಿ ‘ಡಿ’ ಶ್ರೇಣಿಯ ನೌಕರರಿದ್ದಾರೆ.

ಆಡಳಿತಾತ್ಮಕ ವಿಭಾಗವು ರಿಜಿಸ್ಟ್ರಾರ್ ಅವರ ನಿಯಂತ್ರಣದಲ್ಲಿದ್ದು, ಅವರು ಸೇವಾ ವಿಚಾರಗಳು, ದಾಖಲೆಗಳ ನಿರ್ವಹಣೆ, ಅಧಿಕಾರಿಗಳ ಸೇವಾ ವಿವರಗಳಿಗೆ ಸಂಬಂಧ ಪಟ್ಟಂತೆ ವರ್ಗಾವಣೆ ಮತ್ತು ನೇಮಕ ಹಾಗೆಯೇ ಆದೇಶಗಳನ್ನು ಅನುಷ್ಠಾನಗೊಳಿಸುವ ಕಾರ್ಯ, ನಾನ್-ಗಜೆಟೆಡ್ ಅಧಿಕಾರಿಗಳ ವೇತನ ಹೆಚ್ಚಳ ಮತ್ತು ಅದಕ್ಕೆ ಸಂಬಂಧಿಸಿದ ಪತ್ರವ್ಯವಹಾರ,ಇತ್ಯಾದಿ ಕಾರ್ಯನಿರ್ವಹಿಸುತ್ತಾರೆ. ಕಚೇರಿಗೆ ಅಗತ್ಯವಿರುವ ಪುಸ್ತಕ ಸಾಮಾಗ್ರಿ ಖರೀದಿ ಮತ್ತು ವಿಭಾಗೀಯ ಕಚೇರಿಗಳಿಗೆ ಆರ್ ಎಸ್ ಎಲ್ ಮಂಜೂರಾತಿ ಮಾಡುವ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಶಿಸ್ತುಕ್ರಮದ ವ್ಯಾಜ್ಯಗಳಲ್ಲಿ ಸರಕಾರದಿಂದ ನಿಯೋಜಿಸಲ್ಪಟ್ಟ ಹಾಗೆ ದಾಖಲೆಗಳನ್ನು ಒದಗಿಸುವ ಅಧಿಕಾರ ಕೂಡಾ ಹೊಂದಿರುತ್ತಾರೆ.

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ) ಮುಖ್ಯ ಅಭಿಯಂತರರ ಕಚೇರಿ ಮಾಹಿತಿ ಹಕ್ಕು ಕಾಯ್ದೆ-2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರವಾಗಿದೆ.

ಲೆಕ್ಕ ಪತ್ರ ವಿಭಾಗ

ಲೆಕ್ಕ ಪತ್ರ ವಿಭಾಗವು ಲೆಕ್ಕಾಧಿಕಾರಿಯವರ ಅಧೀನದಲ್ಲಿದ್ದು, ಅವರು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತಾರೆ.

 1. ಯೋಜನಾ ಮತ್ತು ಯೋಜನೇತರ ಖರ್ಚುಗಳಿಗಾಗಿ ಅಂದಾಜು ಆಯವ್ಯಯ ಪಟ್ಟಿ ತಯಾರಿಸುವುದು.
 2. ಸಂಬಳ ಮತ್ತು ನಿರ್ವಹಣೆಗೆ ಹಣ ಹಂಚಿಕೆ.
 3. ನಬಾರ್ಡ್‌ನಿಂದ ಮರುಪಾವತಿ ಯೋಜನೆಗಳಿಗೆ ಅನುದಾನ ಮತ್ತು ಅಂದಾಜು ಪಟ್ಟಿ ತಯಾರಿಸುವುದು.
 4. ಕೇಂದ್ರ ಕಚೇರಿಯ ಲೆಕ್ಕ ದಾಖಲೆಗಳ ಸಮನ್ವಯೀಕರಣ ಮತ್ತು ಆರ್‌ಎಸ್‌ಎಲ್ ಮಂಜೂರು ಮಾಡುವುದು.
 5. ಮಹಾಲೇಖಪಾಲರ ವರದಿ ತನಿಖೆ ನಡೆಸಿ ಕರಡು ಪ್ರತಿಯನ್ನು ಅಂತಿಮಗೊಳಿಸುವುದು.
 6. ಬಾಕಿ ಇರುವ ಬಿಲ್ಲುಗಳ ಪಟ್ಟಿ ತಯಾರಿಸುವುದು.

ತಾಂತ್ರಿಕ ವಿಭಾಗ

ಕಾರ್ಯ ನಿರ್ವಾಹಕ ಅಭಿಯಂತರರು (ವಿನ್ಯಾಸ) ಇಲಾಖೆಯ ಎಲ್ಲಾ ತಾಂತ್ರಿಕ ವಿಚಾರಗಳ ಉಸ್ತುವಾರಿಯಾಗಿರುತ್ತಾರೆ. ಇವರಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಯ ಆರು ಮಂದಿ(ದಕ್ಷಿಣ ವಲಯ) ಅಧಿಕಾರಿಗಳು ತಾಂತ್ರಿಕ ಸಹಾಯಕರಾಗಿರುತ್ತಾರೆ. ಸಣ್ಣ ನೀರಾವರಿ ಉತ್ತರ ವಲಯದಲ್ಲಿ ಅಧೀಕ್ಷಕ ಅಭಿಯಂತರರು ಎಲ್ಲಾ ತಾಂತ್ರಿಕ ವಿಚಾರಗಳ ಉಸ್ತುವಾರಿಯಾಗಿದ್ದು, ಇವರಿಗೆ ಒಬ್ಬರು ಡೆಪ್ಯುಟಿ ಚೀಫ್ ಇಂಜಿನಿಯರ್ (ಕಾರ್ಯನಿರ್ವಾಹಕ ಅಭಿಯಂತರರು) ಮತ್ತು ಐವರು ತಾಂತ್ರಿಕ ಸಹಾಯಕರಿರುತ್ತಾರೆ.

ಪ್ರಮುಖವಾದ ತಾಂತ್ರಿಕ ಕಾರ್ಯಗಳು

 1. ಸಣ್ಣ ನೀರಾವರಿಗೆ ಸಂಬಂಧಿಸಿದ ತಾಂತ್ರಿಕ ಕಾಮಗಾರಿಗಳ ಪರಿಶೀಲನೆ
 2. ಯೋಜನೆಗಳಿಗೆ ಸಂಬಂಧಿಸಿದ ಅಂದಾಜು, ವಿನ್ಯಾಸ ಮತ್ತು ಟೆಂಡರ್‌ಗಳನ್ನು ಅಂತಿಮಗೊಳಿಸುವಿಕೆ.
 3. ರೂ.50 ಲಕ್ಷಕ್ಕೆ ಮಿಕ್ಕ ಕಾಮಗಾರಿಗಳನ್ನು ಸಣ್ಣ ನೀರಾವರಿ ದಕ್ಷಿಣ ವಲಯದಲ್ಲಿ ರೂಪಿತವಾಗಿರುವ ತಾಂತ್ರಿಕ ಸಲಹಾ ಸಮಿತಿಯ ಮುಂದಿಟ್ಟು ಅನುಮತಿ ಪಡೆಯುವುದು.
 4. ಇ-ಪ್ರೊಕ್ಯೂರ್‌ಮೆಂಟ್
 5. ಸಣ್ಣ ನೀರಾವರಿಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ
 6. ಆರ್‌ಡಿಎಫ್‌ನಡಿಯಲ್ಲಿ ಬರುವ ನಬಾರ್ಡ್ ಯೋಜನೆಗಳ ಪರಿಶೀಲನೆ
 7. ಎಂಎಂಆರ್ ಮತ್ತು ಕೆಡಿಪಿ ಗಾಗಿ ಕಾಮಗಾರಿ ಪ್ರಗತಿ ವರದಿ ತಯಾರಿ
 8. ವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ತಯಾರಿ
 9. ವಾರ್ಷಿಕ ವರದಿ ತಯಾರಿಸುವುದು.
 10. ಅಂದಾಜು ಮತ್ತು ಯೋಜನಾ ಸಮಿತಿ ಸಭೆಗಳಲ್ಲಿ ಭಾಗವಹಿಸುವುದು
 11. ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳ ಪ್ರಶ್ನೆಗಳಿಗೆ ಉತ್ತರಿಸುವುದು.

ವಿನ್ಯಾಸ ವಿಭಾಗ

ವಿನ್ಯಾಸ ವಿಭಾಗದ ಜವಾಬ್ದಾರಿಗಳು ಈ ಕೆಳಗಿನಂತಿವೆ:

 1. ಸಣ್ಣ ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಕಾರ್ಯ ಮತ್ತು ವಿನ್ಯಾಸವನ್ನು ಅಂತಿಮಗೊಳಿಸುವುದು.
 2. ನೀರೆತ್ತುವ ಯೋಜನೆಗಳ ಮತ್ತು ಪಂಪ್‌ಗಳ ವಿನ್ಯಾಸವನ್ನು ತಪಾಸಿಸಿ ಅಂತಿಮ ಹಂತಕ್ಕೆ ತರುವುದು.
 3. ಅಂತರಾಜ್ಯ ವಿವಾದಕ್ಕೊಳಪಡುವ ಕಾವೇರಿ ಮತ್ತು ಕೃಷ್ಣಾ ನದಿಪಾತ್ರಗಳಿಗೆ ಸಂಬಂಧಿಸಿದ ವರದಿ ಸಂಗ್ರಹಿಸುವುದು.
 4. ಸಣ್ಣ ನೀರಾವರಿ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ವ್ಯವಸ್ಥೆ ಮಾಡುವುದು.
 5. ಸಣ್ಣ ನೀರಾವರಿ ಇಲಾಖೆಗೆ (ದಕ್ಷಿಣ ವಲಯ) ಸಂಬಂಧಿಸಿದ ವಾಹನಗಳಿಗೆ ಸಂಬಂಧಿಸಿದ ವಿಚಾರಗಳನ್ನು ನೋಡಿಕೊಳ್ಳುವುದು.

ಅಂಕಿ-ಅಂಶ ವಿಭಾಗ

ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯದಲ್ಲಿ ಅಂಕಿ-ಅಂಶ ವಿಭಾಗ ಬೆಂಗಳೂರಿನಲ್ಲಿ 1988-89ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಲಾಖೆಯ ಕಾರ್ಯಗಳನ್ನು ನಿಯಮಿತವಾಗಿ ಅಂಕಿ-ಅಂಶಗಳ ಪ್ರಕಾರದಲ್ಲಿ ರೂಪಿಸಲಾಗುತ್ತಿದೆ. ಈ ವಿಭಾಗವು ಕೇಂದ್ರ ಸರಕಾರದ ಜಲ ಸಂಪನ್ಮೂಲ ಸಚಿವಾಲಯದ ಸಣ್ಣ ನೀರಾವರಿ ಅಂಕಿ-ಅಂಶಗಳ ಪ್ರಾಯೋಜಿತ ಆರ್ಥಿಕ ನೆರವಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವಿಭಾಗಕ್ಕೆ 5 ಹುದ್ದೆಗಳು ಮಂಜೂರಾಗಿದ್ದು,   ಅವುಗಳಲ್ಲಿ ಎರಡು ಹುದ್ದೆ ಖಾಲಿ ಇದೆ.

ಸಣ್ಣ ನೀರಾವರಿ ಉತ್ತರ ವಲಯದಲ್ಲಿ ಅಂಕಿ-ಅಂಶಗಳ ವಿಭಾಗದಿಂದ ನಿಯೋಜಿತರಾದ ಸಿಬ್ಬಂದಿಯ ವಿವರ ಈ ಕೆಳಗಿನಂತಿದೆ.

 1. ಜಂಟಿ ನಿರ್ದೇಶಕ – ಮಂಜೂರಾದ ಹುದ್ದೆಗಳು – 1, ಕಾರ್ಯನಿರತ ಹುದ್ದೆಗಳು-0

2.      ಸಹಾಯಕ ಅಂಕಿಅಂಶಗಳ ಅಧಿಕಾರಿ – ಮಂಜೂರಾದ ಹುದ್ದೆಗಳು-2, ಕಾರ್ಯನಿರತ ಹುದ್ದೆಗಳು-1

3.      ಅಂಕಿಅಂಶಗಳ ತಪಾಸಕ – ಮಂಜೂರಾದ ಹುದ್ದೆಗಳು -1, ಕಾರ್ಯನಿರತ ಹುದ್ದೆಗಳು – 1

4.      ‘ಡಿ’ ಗುಂಪು – ಮಂಜೂರಾದ ಹುದ್ದೆಗಳು -1, ಕಾರ್ಯನಿರತ ಹುದ್ದೆಗಳು – 1

ಕೇಂದ್ರ ಸರಕಾರದ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ನಾಲ್ಕನೇ ಸಣ್ಣ ನೀರಾವರಿ ಗಣತಿ ಕಾರ್ಯವು 2006-07 ನೇ ಇಸವಿಗೆ ಅನುಗುಣವಾಗಿ ಯಶಸ್ವಿಯಾಗಿ ನಡೆದಿದೆ. ರಾಜ್ಯ ಮತ್ತು ಜಿಲ್ಲಾವಾರು ಗಣತಿ ವಿವರಗಳನ್ನು ಪ್ರಕಟಿಸಲಾಗಿದೆ.

ಇವೇ ಕಾರ್ಯಗಳಲ್ಲದೇ, ಇನ್ನೂ ಹಲವು ಕಾರ್ಯಗಳನ್ನು ಅಂಕಿ-ಅಂಶಗಳ ಇಲಾಖೆ ನಿರ್ವಹಿಸುತ್ತದೆ. ಅವು ಈ ಕೆಳಗಿನಂತಿದೆ.

 1. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು, ಜಿಲ್ಲೆ, ವಿಧಾನಸಭಾ ಕ್ಷೇತ್ರವಾರು ಇರುವ ಕೆರೆಗಳು, ಅಣೆಕಟ್ಟುಗಳು, ಇತ್ಯಾದಿಗಳು ಹಾಗೂ 2010ರ ಎಸ್‌ಡಬ್ಲ್ಯೂಇಡಿ ಯೋಜನೆಗಳ ಸಂಬಂಧಿತ ವರದಿ ತಯಾರಿಸುವುದು.
 2. ಕಾಲಕ್ಕೆ ತಕ್ಕಂತೆ ತಾಲೂಕುವಾರು ಮತ್ತು ಜಿಲ್ಲಾವಾರು ನೀರಿನ ಪ್ರಮಾಣದ ವರದಿಯನ್ನು 2009-10 ಕ್ಕೆ ಸಂಬಂಧಿಸಿದಂತೆ ವರದಿ ತಯಾಗಿಸುವುದು ಮತ್ತು ಬೆಳೆಗಳಿಗೆ ತಕ್ಕಂತೆ ನೀರಿನ ಬೇಡಿಕೆಮತ್ತು ಬಳಕೆಯಾದ ನೀರಿನ ಬಳಕೆಯ ವರದಿ ತಯಾರಿಸುವುದು.
 3. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿನ ಕಾರ್ಯ ಪ್ರಗತಿಯ ಮತ್ತು ಆರ್ಥಿಕ ಸಂಪನ್ಮೂಲದ ಸಂಯೋಜಿತ ವರದಿಯನ್ನು ಪ್ರತೀ ತಿಂಗಳೂ ಎಂಪಿಕ್ ಆಧಾರದಲ್ಲಿ ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ) ಇಲಾಖೆ ಕಾರ್ಯದರ್ಶಿಯವರಿಗೆ ಮಾಸಿಕ ಪ್ರಗತಿ ಪರಿಶೀಲನೆಗಾಗಿ ನೀಡುವುದು.
 4. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಯ ತ್ರೈಮಾಸಿಕ ವರದಿಯೊಂದಿಗೆ ಸಂಬಂಧಪಟ್ಟ ಇಲಾಖೆಗಳಾದ ನಬಾರ್ಡ್, ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ, ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಜೊತೆಗೆ ಉಭಯ ವಲಯಗಳ ಕಾರ್ಯಪ್ರಗತಿ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸುವುದು.
 5. ಉಭಯ ವಲಯಗಳಲ್ಲಿ ಕೈಗೊಳ್ಳಲಾದ ಕಾರ್ಯಗಳನ್ನು ಕೇಂದ್ರೀಕರಿಸಿ ವಾರ್ಷಿಕ ಆಡಳಿತಾತ್ಮಕ ವರದಿ ತಯಾರಿಸಿ ಮತ್ತು ಮುದ್ರಿಸಿ ಸರಕಾರಕ್ಕೆ ಒಪ್ಪಿಸುವುದು.
 6. ಮಾನ್ಸೂನ್ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಕೆರೆಗಳ ಸ್ಥಿತಿ-ಗತಿ ಕುರಿತಾಗಿ ವಾರ ಮತ್ತು ತಿಂಗಳುವಾರು ವರದಿ ತಯಾರಿಸಿ ಸರಕಾರಕ್ಕೆ ನೀಡುವುದು.
 7. ಇಲಾಖೆಯಲ್ಲಿನ ಇತರೇ ಕಾರ್ಯಗಳ ಕುರಿತಾಗಿ ಸರಕಾರಕ್ಕೆ ವರದಿ ಸಲ್ಲಿಸಿ, ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲ ಮಾಡಿಕೊಡುವುದು.

ತಾಂತ್ರಿಕ ಮೌಲ್ಯೀಕರಣ ಸಮಿತಿ

ತಾಂತ್ರಿಕ ಮೌಲ್ಯೀಕರಣ ಸಮಿತಿಯು ಕರ್ನಾಟಕ ರಾಜ್ಯಸರಕಾರದಿಂದ ಆದೇಶ ಸಂಖ್ಯೆ ಎಸ್‌ಎಎ ನಿ ಇ 145 ವಿ 2014, ಬೆಂಗಳೂರು, ದಿನಾಂಕ 27/10/2017ರ ಪ್ರಕಾರ ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್.ಟಿ. ಚೆನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದೆ. ಈ ಸಮಿತಿಯ ಕಾಲಾವಧಿಯು 27/10/2017ರ ವರೆಗೆ ಅಂದರೆ ಎರಡು ವರ್ಷಗಳದ್ದಾಗಿದೆ. ಸಮಿತಿಯ ಉದ್ದೇಶಗಳೆಂದರೆ,

 1. ರೂ.200 ಲಕ್ಷಕ್ಕೆ ಮೀರಿದ ಕಾಮಗಾರಿಗಳ ಅಂದಾಜು ವಿವರಗಳನ್ನು ಪರಿಶೀಲಿಸುವುದು.
 2. ರೂ.250.00 ಲಕ್ಷಕ್ಕೆ ಮೀರಿದ ಡಿಟಿಪಿ ಗಳನ್ನು ಪರಿಶೀಲಿಸುವುದು.
 3. ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಮಗಾರಿಗಳ ಪ್ರಗತಿಗೆ ಸೂಕ್ತ ಸಲಹೆ ಮತ್ತು ಪರಿಹಾರದ ಮಾರ್ಗದರ್ಶನ ನೀಡುವುದು.

ತಾಂತ್ರಿಕ ಮೌಲ್ಯೀಕರಣ ಸಮಿತಿಯ ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿದೆ:

ಕ್ರ. ಸಂ ನಾನ್-ಎಕ್ಸಿಕ್ಯೂಟಿವ್ ಹುದ್ದೆ
1 ಎಸ್.ಜೆ. ಚೆನ್ನಬಸಪ್ಪ, ನಿವೃತ್ತ ಕಾರ್ಯದರ್ಶಿ, ಕರ್ನಾಟಕ ಸರಕಾರ ಅಧ್ಯಕ್ಷರು
2 ಎಸ್.ಎನ್.ಪ್ರಸಾದ್, ನಿವೃತ್ತ ಇಂಜಿನಿಯರ್  ಸದಸ್ಯರು
3 ಪ್ರೊ. ರಾಮ್‌ಪ್ರಸಾದ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ನಿವೃತ್ತ) ಸದಸ್ಯರು
4 ಎನ್. ನಾಗಣ್ಣ, ನಿವೃತ್ತ ಮುಖ್ಯ ಅಭಿಯಂತರರು ಸದಸ್ಯರು
5 ಎಂ.ಸಿ. ರಂಗರಾಜನ್, ನಿವೃತ್ತ ಕಾರ್ಯಕಾರಿ ನಿರ್ದೇಶಕರು, ಕೆಪಿಸಿಎಲ್  ಸದಸ್ಯರು
6 ಸಿ. ಅನಂತರಾಮು, ನಿವೃತ್ತ ಮುಖ್ಯ ಅಭಿಯಂತರರು  ಸದಸ್ಯರು
7 ಎಚ್. ಹನುಮಂತರಾಯ, ನಿವೃತ್ತ ಮುಖ್ಯ ಅಭಿಯಂತರರು  ಸದಸ್ಯರು
8 ಬಿ.ಬಿ. ರಾಂಪುರೆ, ನಿವೃತ್ತ ಮುಖ್ಯ ಅಭಿಯಂತರರು  ಸದಸ್ಯರು
8 ಎಮ್.ಎಲ್. ಮಾದಯ್ಯ, ನಿವೃತ್ತ ಮುಖ್ಯ ಅಭಿಯಂತರರು  ಸದಸ್ಯರು
ಕ್ರ. ಸಂ ಅಧಿಕೃತ ಸದಸ್ಯರು ಹುದ್ದೆ
1 ಮುಖ್ಯ ಅಭಿಯಂತರರು, ಸಣ್ಣ ನೀರಾವರಿ (ಉತ್ತರ ವಲಯ) ಸದಸ್ಯರು ಸದಸ್ಯರು
2 ಮುಖ್ಯ ಅಭಿಯಂತರರು, ಸಣ್ಣ ನೀರಾವರಿ (ದಕ್ಷಿಣ ವಲಯ) ಸದಸ್ಯ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿ

ಸರಕಾರಿ ಆದೇಶದ ಪ್ರತಿ

ತಾಂತ್ರಿಕ ಸಮಿತಿ

ತಾಂತ್ರಿಕ ಸಮಿತಿಯು ರಾಜ್ಯ ಸರಕಾರದ ಆದೇಶ ಸಂಖ್ಯೆ: ಸನಿಇ 76 ಮ ಸಾ ವಿ 2010 (2),ಬೆಂಗಳೂರು, ದಿನಾಂಕ 15/5/2010 ಪ್ರಕಾರ ರೂಪುಗೊಂಡಿದೆ. ಈ ಸಮಿತಿಗೆ ಸಣ್ಣ ನೀರಾವರಿ (ದಕ್ಷಿಣ) ಮುಖ್ಯ ಅಭಿಯಂತರರು/ಸಣ್ಣ ನೀರಾವರಿ (ದಕ್ಷಿಣ) ಮುಖ್ಯ ಅಭಿಯಂತರರು ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯು ರೂ.50 ಲಕ್ಷಕ್ಕೆ ಮೇಲ್ಪಟ್ಟ ಮತ್ತು ರೂ.200 ಲಕ್ಷದೊಳಗಿನ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುತ್ತದೆ.

ಸರಕಾರಿ ಆದೇಶದ ಪ್ರತಿ

ತಾಂತ್ರಿಕ ಉಪಸಮಿತಿ

ತಾಂತ್ರಿಕ ಉಪಸಮಿತಿಯು ಸರಕಾರಿ ಆದೇಶ ಸ ನಿ ಇ 76 ಮ ಸಾ ವಿ 2010(2) ಬೆಂಗಳೂರು, ದಿನಾಂಕ 15/5/2010 ರಂತೆ ರಚಿತವಾಗಿದೆ. ಈ ಸಮಿತಿಯು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಸಣ್ಣ ನೀರಾವರಿ ವೃತ್ತಗಳ ಅಧೀಕ್ಷಕರನ್ನು ಅಧ್ಯಕ್ಷರನ್ನಾಗಿ ಹೊಂದಿರುತ್ತದೆ. ಈ ಸಮಿತಿಯಿ ರೂ.30 ಲಕ್ಷಕ್ಕೆ ಮಿಕ್ಕ ಮತ್ತು ರೂ. 50 ಲಕ್ಷ ವರೆಗಿನ ಕಾಮಗಾರಿಗಳ ಪರಿಶೀಲನೆ ನಡೆಸುತ್ತದೆ.

ಸರಕಾರಿ ಆದೇಶದ ಪ್ರತಿ

ಟೆಂಡರ್ ಪರಿಶೀಲನಾ ಸಮಿತಿ

ಬೆಂಗಳೂರಿನ ಮುಖ್ಯ ಇಂಜಿನಿಯರ್ (ದಕ್ಷಿಣ ವಲಯ) ಇವರ ಅಧ್ಯಕ್ಷತೆಯಲ್ಲಿ, ಸರಕಾರಿ ಆದೇಶ ಸಂಖ್ಯೆ SANEE / 86 / MASAVI / 2017 (ಟೆಕ್) ಬೆಂಗಳೂರು ಇದರ ಅಡಿಯಲ್ಲಿ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.

 • ಅಧಿಕಾರಿಗಳು ಟೆಂಡರ್ ಪರಿಶೀಲನಾ ಸಮಿತಿಯಲ್ಲಿ ಟೆಂಡರ್ ದಾಖಲೆಗಳನ್ನು ಪರಿಶೀಲನೆ ಮಾಡುವುದು, ಟೆಂಡರ್ ತೆರೆಯುವಿಕೆಯ ಮೇಲ್ವಿಚಾರಣೆ ವಹಿಸುವುದು ಹಾಗೂ ಪ್ರಾಥಮಿಕ ಪರೀಕ್ಷೆ ಮತ್ತು ಟೆಂಡರುಗಳ ವಿವರವಾದ ಮೌಲ್ಯಮಾಪನವನ್ನು ಪಡೆಯುವುದು ಮತ್ತು ಈ ಪರಿಶೀಲಿಸಿದ ದಾಖಲೆಗಳನ್ನು ಟೆಂಡರ್ ಸ್ವೀಕರಣಾ ಪ್ರಾಧಿಕಾರದ ಪರಿಗಣನೆಗೆ ತರುವುದು.
 • ಸಾರ್ವಜನಿಕ ಕೆಲಸಗಳಿಗೆ, ನೀರಾವರಿ ಇಲಾಖೆಗಳ ಮತ್ತು ಸಣ್ಣ ನೀರಾವರಿ ಇಲಾಖೆಗಳ ಟೆಂಡರ್ ಮೌಲ್ಯವು 5 ಕೋಟಿ ಮೇಲ್ಪಟ್ಟಲ್ಲಿ ಮತ್ತು ಇತರ ಇಲಾಖೆಗಳ ಟೆಂಡರ್ ಮೌಲ್ಯವು 1 ಕೋಟಿ ಮೇಲ್ಪಟ್ಟಲ್ಲಿ, ಟೆಂಡರ್ ಸ್ವೀಕರಣಾ ಪ್ರಾಧಿಕಾರವು ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸುತ್ತದೆ.

ಟೆಂಡರ್ ಪರಿಶೀಲನಾ ಸಮಿತಿ (ಪಿ ಡಿ ಎಫ್)

ಕೇಂದ್ರ ಸರಕಾರ ಅನುದಾನದ ಯೋಜನೆಗಳಿಗೆ ತಾಂತ್ರಿಕ ಸಲಹಾ ಸಮಿತಿ

ಜಲ ಸಂಪನ್ಮೂಲಗಳ ರಿಪೇರಿ,ನವೀಕರಣ ಮತ್ತು ಪುನರುಜ್ಜೀವನ

ಇದು ರಾಜ್ಯ ವಲಯದ ಯೋಜನೆಯಾಗಿದೆ. ಇದರಲ್ಲಿ ಶೇ.90 ರಷ್ಟು ಅನುದಾನವು ವಿಶೇಷವಾಗಿ ಗುರುತಿಸಲ್ಪಟ್ಟ ರಾಜ್ಯಗಳಿಗೆ ಕೇಂದ್ರ ಸರಕಾರದಿಂದ ಬರುತ್ತದೆ. ವಿಶೇಷ ಕೆಟಗರಿಯಲ್ಲಿ ಗುರುತಿಸದ ರಾಜ್ಯಗಳಿಗೆ ಕೇಂದ್ರ ಸರಕಾರವು ಶೇ.25ರಷ್ಟು ಅನುದಾನ ನೀಡಿದರೆ, ರಾಜ್ಯ ಸರಕಾರವು ಶೇ.75ರಷ್ಟು ಅನುದಾನ ಒದಗಿಸುತ್ತದೆ. ಯೋಜನೆಗಳಿಗೆ ತಾಂತ್ರಿಕ-ಆರ್ಥಿಕ ವರದಿ ಮತ್ತು ಡಿಪಿಆರ್ ಅನುಮೋದನೆಗಾಗಿ ತಾಂತ್ರಿಕ ಸಲಹಾ ಸಮಿತಿಯು ರೂಪಿತವಾಗಿದೆ. ಈ ಸಲಹಾ ಸಮಿತಿಯಲ್ಲಿ ಸಿಡಬ್ಲ್ಯೂಸಿ ಮತ್ತು ಸಿಜಿಡಬ್ಲ್ಯೂಬಿಯ ಪ್ರತಿನಿಧಿಗಳನ್ನು ಹೊಂದಿರುತ್ತದೆ.

ಸರಕಾರದ ಆದೇಶ ಪ್ರತಿ

ವೇಗವರ್ಧಿತ ನೀರಾವರಿ ಲಾಭದ ಕಾರ್ಯಕ್ರಮ (AIBP)

ಕೇಂದ್ರ ಸರಕಾರವು ತನ್ನ ಪತ್ರ ಸಂಖ್ಯೆ 10-2/2010-ಎಂಐ ದಿನಾಂಕ 03-01-2011ರಲ್ಲಿ ತಾಂತ್ರಿಕ ಸಲಹಾ ಸಮಿತಿಯನ್ನು ಯೋಜನೆಗಳ ತಾಂತ್ರಿಕ-ಆರ್ಥಿಕ ಮೌಲ್ಯೀಕರಣಕ್ಕಾಗಿ ರಚಿಸುವಂತೆ ಸೂ

 

 

ಸರಕಾರದ ಆದೇಶದ ಪ್ರತಿ 

ಇತ್ತೀಚಿನ ನವೀಕರಣ​ : 07-09-2020 11:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಣ್ಣ ನೀರಾವರಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080