ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶವು 19.04 ಮಿಲಿಯನ್ ಹೆಕ್ಟೇರುಗಳಷ್ಟು ವಿಸ್ತೀರ್ಣ ಉಳ್ಳದ್ದಾಗಿದೆ.ಇದರಲ್ಲಿ 12.61 ಮಿಲಿಯನ್ ಹೆಕ್ಟೇರು ಪ್ರದೇಶವು ಕೃಷಿಯೋಗ್ಯವಾಗಿದ್ದು, ಇದರಲ್ಲಿ 61.00 ಲಕ್ಷ ಹೆಕ್ಟೇರು ಪ್ರದೇಶವು ನೀರಾವರಿ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಸಣ್ಣ ನೀರಾವರಿ ಯೋಜನೆಗಳು ಸುಮಾರು 10.00 ಲಕ್ಷ ಹೆಕ್ಟೇರು ವಿಸ್ತೀರ್ಣಕ್ಕೆ ಸಾಕಾಗುವಷ್ಟಿದೆ ಎಂದು ಅಂದಾಜಿಸಲಾಗಿದೆ.

ಎಲ್ಲಾ ಅಂತರ್ಜಲ ಮತ್ತು ಬಾಹ್ಯಜಲ ಯೋಜನೆಗಳು  ಅಂದರೆ ಹರಿಯುವ ಮತ್ತು ನೀರೆತ್ತುವ 2000 ಹೆಕ್ಟೇರು ವರೆಗಿನ ಅಚ್ಚುಕಟ್ಟು ಪ್ರದೇಶ ಸಣ್ಣ ನೀರಾವರಿ ಯೋಜನಾ ವ್ಯಾಪ್ತಿಗೆ ಬರುತ್ತದೆ. ಸಣ್ಣ ನೀರಾವರಿ ಯೋಜನೆಗಳು ಕೃಷಿಕರಿಗೆ ಸಮಯ ಸಂದರ್ಭಾನುಸಾರವಾಗಿ ನೀರು ಪೂರೈಸಿ, ಕೃಷಿ ಉತ್ಪನ್ನ ಹೆಚ್ಚಳವಾಗುವಂತೆ ಮತ್ತು ಈ ಮೂಲಕ ಬೆಳೆಗಾರರ ಅವಶ್ಯಕತೆಗಳನ್ನು ಸಮಗ್ರವಾಗಿ ಪೂರೈಸುವುದಾಗಿದೆ.

ಈ ಹಿಂದೆ ಅಂದರೆ, 1986-87ರಿಂದ, ಸರ್ಕಾರಿ ಸುತ್ತೋಲೆ ಸಂಖ್ಯೆ ಪಿಡಬ್ಲ್ಯೂಡಿ2,ಐಎಫ್‌ವೈ 1987, ಬೆಂಗಳೂರು, ದಿನಾಂಕ 06-05-1987 ರ ಪ್ರಕಾರ 200 ಹೆಕ್ಟೇರು ವಿಸ್ತೀರ್ಣದ ಅಚ್ಚುಕಟ್ಟು ಪ್ರದೇಶ ಹೊಂದಿರುವ ಯೋಜನೆಗಳು ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ನಂತರದ ಸರ್ಕಾರಿ ಆದೇಶ ಸಂಖ್ಯೆ ಐಡಿ ೨ಐಎಫ್‌ವೈ 87, ಬೆಂಗಳೂರು ದಿನಾಂಕ 06-08-1992ರ ಪ್ರಕಾರ 40 ರಿಂದ 200 ಹೆಕ್ಟೇರ್‌ಗಳು ಜಿಲ್ಲಾ ಪಂಚಾಯತ್‌ನಿಂದ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಗೆ ಹಸ್ತಾಂತರಗೊಂಡಿವೆ.

ಪ್ರಸ್ತುತ 40 ರಿಂದ 2000 ಹೆಕ್ಟೇರು ಅಚ್ಚುಕಟ್ಟು ಪ್ರದೇಶ ಹೊಂದಿರುವ ಬಾಹ್ಯಜಲ ಸಣ್ಣ ನೀರಾವರಿ ಯೋಜನೆಗಳು  ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿಇಲಾಖೆಯ  ವ್ಯಾಪ್ತಿಗೆ ಬರುತ್ತವೆ. ಅಂತರ್ಜಲ ಯೋಜನೆಗಳು ಅಂತರ್ಜಲ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತವೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ಇಲಾಖೆ ಎರಡು ವಲಯಗಳಾಗಿ ವಿಭಜಿಸಲ್ಪಟ್ಟಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ದಕ್ಷಿಣ ವಲಯ ಬೆಂಗಳೂರಿನಲ್ಲಿದ್ದರೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ಉತ್ತರ ವಲಯ ವಿಜಯಪುರದಲ್ಲಿದೆ. ಎರಡೂ ವಲಯಗಳಿಗೂ ಮುಖ್ಯ ಅಭಿಯಂತರರು ಮುಖ್ಯಸ್ಥರಾಗಿರುತ್ತಾರೆ.

ಈ ಎರಡೂ ವಲಯಗಳ ಆಡಳಿತಾತ್ಮಕ ನಿರ್ವಹಣೆಯುಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ಇಲಾಖೆಯ ಕಾರ್ಯದರ್ಶಿಯವರ ಕಾರ್ಯವ್ಯಾಪ್ತಿಗೆ ಬರುತ್ತದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ  ದಕ್ಷಿಣ ವಲಯ ಎರಡು ವೃತ್ತ ಕಚೇರಿಗಳನ್ನು ಹೊಂದಿದ್ದು, ಒಂದು ಬೆಂಗಳೂರಿನಲ್ಲಿ ಮತ್ತು ಇನ್ನೊಂದು ಮೈಸೂರಿನಲ್ಲಿದೆ. ಈ ಎರಡೂ ಕಚೇರಿಗಳು ಸುಪರಿಂಟೆಂಡಿಂಗ್ ಇಂಜಿನಿಯರ್‌ಗಳ ವ್ಯಾಪ್ತಿಯಲ್ಲಿದೆ. ಬೆಂಗಳೂರು ವೃತ್ತದಲ್ಲಿ 6 ಸಣ್ಣ ನೀರಾವರಿ ವಿಭಾಗಗಳಿವೆ. ಅವುಗಳೆಂದರೆ ಬೆಂಗಳೂರು, ಚಿತ್ರದುರ್ಗ,ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ತುಮಕೂರು. ಹಾಗೆಯೇ ಮೈಸೂರು ವೃತ್ತದಲ್ಲಿಮೂರು ಸಣ್ಣ ನೀರಾವರಿ ವಿಭಾಗಗಳಿದ್ದು, ಅವುಗಳೆಂದರೆ ಹಾಸನ,ಮಂಗಳೂರು ಮತ್ತು ಮೈಸೂರು. ಪ್ರತೀ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ವಿಭಾಗವೂ ಕಾರ್ಯನಿರ್ವಾಹಕ ಅಭಿಯಂತರರ ವ್ಯಾಪ್ತಿಯಲ್ಲಿವೆ. ಬೆಂಗಳೂರಿನಲ್ಲಿ ಒಂದು ಗುಣಮಟ್ಟ ನಿಯಂತ್ರಣ ವಿಭಾಗವಿದ್ದು, ಇದು ಮೂರು ಗುಣಮಟ್ಟ ನಿಯಂತ್ರಣ ಉಪವಿಭಾಗಗಳನ್ನು ಹೊಂದಿದೆ. ಅಂದರೆ ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗ ಉಪ-ವಿಭಾಗಗಗಳು. ಈ ಮೂರು ಉಪ-ವಿಭಾಗಗಳು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿಇಲಾಖೆಯ ದಕ್ಷಿಣ ವಲಯದ ಕಾಮಗಾರಿಗಳಲ್ಲಿನ ಗುಣಮಟ್ಟಕ್ಕೆ ಸಂಬಂಧಿಸಿದ ವಿಚಾರಗಳನ್ನು ನಿಯಂತ್ರಿಸುತ್ತವೆ. ಈ ಎಲ್ಲಾ 24 ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ಉಪವಿಭಾಗಗಳೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ನಿಯಂತ್ರಣದಲ್ಲಿರುತ್ತವೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿ ಉತ್ತರ ವಲಯವು ಎರಡು ವೃತ್ತ ಕಚೇರಿಗಳನ್ನು ಹೊಂದಿದ್ದು, ಒಂದು ಬೆಳಗಾವಿಯಲ್ಲಿಯೂ ಇನ್ನೊಂದು ಕಲಬುರಗಿಯಲ್ಲಿಯೂ ಇದೆ. ಈ ಎರಡೂ ಕಚೇರಿಗಳೂ ಸುಪರಿಂಟೆಂಡಿಂಗ್ ಇಂಜಿನಿಯರ್ ಅಧೀನದಲ್ಲಿವೆ. ಬೆಳಗಾವಿ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ನಾಲ್ಕು ವಿಭಾಗಗಳಿದ್ದು, ಅವುಗಳು ಬೆಳಗಾವಿ, ಧಾರವಾಡ,ಹಳಿಯಾಳ ಮತ್ತು ಬಿಜಾಪುರದಲ್ಲಿವೆ. ಕಲಬುರಗಿ ವೃತ್ತದಲ್ಲಿ ನಾಲ್ಕು ವಿಭಾಗೀಯ ಕಚೇರಿಗಳಿದ್ದು ಅವು ಕಲಬುರಗಿ, ಬೀದರ್,ಕೊಪ್ಪಳ ಮತ್ತು ಬಳ್ಲಾರಿಯಲ್ಲಿವೆ. ಪ್ರತೀ ವಿಭಾಗೀಯ ಕಚೇರಿಯೂ ಕಾರ್ಯನಿರ್ವಾಹಕ ಅಭಿಯಂತರರ ಅಧೀನದಲ್ಲಿವೆ.

ಇನ್ನು ಧಾರವಾಡದಲ್ಲಿರುವ ಗುಣಮಟ್ಟ ನಿಯಂತ್ರಣ ವಿಭಾಗದ ವ್ಯಾಪ್ತಿಯಲ್ಲಿ ನಾಲ್ಕು ಗುಣಮಟ್ಟ ನಿಯಂತ್ರಣ ಉಪ-ವಿಭಾಗಗಳಿವೆ. ಇವು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದ್ದಿಉತ್ತರ ವಲಯ ವಿಜಯಪುರ ವ್ಯಾಪ್ತಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣದ ಕಾರ್ಯನಿರ್ವಹಿಸುತ್ತವೆ. ಇದರ ವ್ಯಾಪ್ತಿಯಲ್ಲಿ 32 ಸಣ್ಣ ನೀರಾವರಿ ಉಪ-ವಿಭಾಗಗಳಿದ್ದು, ಅವುಗಳು ಒಂಭತ್ತು ವಿಭಾಗಗಳ ಕಾರ್ಯನಿರ್ವಾಹಕ ಅಭಿಯಂತರರ ವ್ಯಾಪ್ತಿಗೆ ಬರುತ್ತವೆ.

ಜಲ ಸಂವರ್ಧನೆ ಯೋಜನಾ ಸಂಘ (ಜೆಎಸ್‌ವೈಎಸ್)

ಜಲ ಸಂವರ್ಧನೆ ಯೋಜನಾ ಸಂಘವು (ಜೆಎಸ್‌ವೈಎಸ್) ಒಂದು ನೋಂದಾಯಿತ ಸಂಸ್ಥೆಯಾಗಿದ್ದು ಕರ್ನಾಟಕ ಸರಕಾರದಿಂದ ಸ್ಥಾಪಿಸಲ್ಪಟ್ಟಿದೆ. ಇದು ಸಮುದಾಯ ಆಧರಿತ ಕೆರೆ ನಿರ್ವಹಣಾ ಯೋಜನೆಗಳ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಜೆಎಸ್‌ವೈಎಸ್‌ನ ಮೂಲಕ ಕೆರೆ ನೀರಾವರಿ ಪದ್ಧತಿಯನ್ನು ಅಭಿವೃದ್ಧಿಪಡಿಸಿ ಮತ್ತು ನಿರ್ವಹಿಸಿ ಜನಸಮುದಾಯಕ್ಕೆ ಒದಗಿಸುವುದಕ್ಕಾಗಿ ರೂಪುಗೊಂಡಿರುವಂತಹದ್ದಾಗಿದೆ.

ಜೆಎಸ್‌ವೈಎಸ್ ಸಣ್ಣ ನೀರಾವರಿ ಕ್ಷೇತ್ರದಲ್ಲಿ ಅಗತ್ಯವಿರುವ ನಿಪುಣತೆ,ಅನುಭವ ಮತ್ತು ವೃತ್ತಿಪರತೆಯೊಂದಿಗೆ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. “ನೀರಾವರಿಗಾಗಿ ಕೆರೆಗಳು ಮತ್ತು ಅಂತರ್ಜಲ ಮೂಲಗಳನ್ನು ಅಭಿವೃದ್ಧಿ ಪಡಿಸಿ ಸಣ್ಣ ನೀರಾವರಿ ಕ್ಷೇತ್ರವನ್ನು ಬಲಪಡಿಸುವ ಮೂಲಕ ಗ್ರಾಮೀಣ ಭಾಗದ ಜನರ ಜೀವನ ಸುಧಾರಣೆ”ಯ ಗುರಿಯನ್ನು ಹೊಂದಿದೆ.

ಜೆಎಸ್‌ವೈಎಸ್‌ಯು ಜಲಸಂಪನ್ಮೂಲ ಸಚಿವರು ಅಧ್ಯಕ್ಷರಾಗಿರುವ ಸಮಿತಿಯ ಉಸ್ತುವಾರಿಯಲ್ಲಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಅಧ್ಯಕ್ಷರಾಗಿರುವ ಕಾರ್ಯನಿರ್ವಾಹಕ ಸಮಿತಿಗೆ ವರದಿ ನೀಡುತ್ತದೆ.

ಜೆಎಸ್‌ವೈಎಸ್ ರಾಜ್ಯ ಯೋಜನಾ ಘಟಕವು ಕಾರ್ಯನಿರ್ವಾಹಕ ನಿರ್ದೇಶಕರ ಅಧೀನದಲ್ಲಿದೆ. ಈ ಘಟಕವು ಬೆಂಬಲಕ್ಕಾಗಿ ವಿವಿಧ ವಿಷಯ ತಜ್ಞರುಗಳ ತಂಡವನ್ನು ಹೊಂದಿದೆ. ಜೆಎಸ್‌ವೈಎಸ್ ಒಂಭತ್ತು ಜಿಲ್ಲಾ ಯೋಜನಾ ಘಟಕಗಳನ್ನು ಹೊಂದಿದ್ದು, ಜಿಲ್ಲಾ ಮಟ್ಟದಲ್ಲಿ ಕಾರ್ಯಪ್ರಗತಿಯ ಉಸ್ತುವಾರಿಗಾಗಿ ತಜ್ಞರ ತಂಡವನ್ನು ಹೊಂದಿದೆ.

ಜಲ ಸಂವರ್ಧನೆ ಯೋಜನಾ ಸಂಘ (ಜೆಎಸ್‌ವೈಎಸ್)

ಅಂತರ್ಜಲ ವಿಭಾಗ

ಅಂತರ್ಜಲ ವಿಭಾಗವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ.

  • ಅಂತರ್ಜಲ ಮೂಲಗಳ ಅಂದಾಜು
  • ಅಂತರ್ಜಲ ಮೂಲಗಳನ್ನು ನೋಡಿಕೊಳ್ಳುವುದು
  • ಮನೆ, ಕೃಷಿ ಮತ್ತು ಕೈಗಾರಿಕಾ ಬಳಕೆಗಾಗಿ ಕೊಳವೆ ಬಾವಿ ಕೊರೆಯುವುದು.

ಭೂಭೌತಿಕ ವಿಭಾಗವು ಭೂಭೌತಿಕ ಪರಿಶೀಲನೆಯ ಮೂಲಕ ಅಂತರ್ಜಲ ಮೂಲಗಳನ್ನು ಗುರುತಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಭೂಭೌತಶಾಸ್ತ್ರಜ್ಞರು ಕೊಳವೆ ಬಾವಿಗಾಗಿ ಸೂಕ್ತ ಸ್ಥಳವನ್ನು ಗುರುತಿಸುವುದಕ್ಕಾಗಿ ಸ್ಥಳ ಸರ್ವೇಕ್ಷಣೆ ಮಾಡುತ್ತಾರೆ.

ಜಲ-ಭೂಗರ್ಭ ತಜ್ಞರು ಕೊಳವೆ ಬಾವಿ ವಿಭಾಗದ ಸಹಕಾರದೊಂದಿಗೆ ಕೊಳವೆ ಬಾವಿಗಳಿಂದ ಪಡೆಯಬಹುದಾದ ನೀರಿನ ಪ್ರಮಾಣವನ್ನು ನಿರ್ಧರಿಸುತ್ತಾರೆ.ಅಂತರ್ಜಲ ಕೊರೆಯುವ ವಿಭಾಗವು ಕೊಳವೆ ಬಾವಿಗಳನ್ನು ಶುದ್ಧೀಕರಿಸುವ, ನೀರು ಮೇಲೆತ್ತುವ ಪಂಪ್‌ಗಳ ಜೋಡಣೆ, ಅಂತರ್ಜಲ ಮತ್ತು ಕೆರೆಗಳ ನೀರನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸುತ್ತದೆ. ಇದಕ್ಕಾಗಿ ಪ್ರಯೋಗಾಲಯ ನಿರ್ದೇಶಕರ ಕಚೇರಿ ಮಾತ್ರವಲ್ಲದೇ ಉಪ-ವಿಭಾಗೀಯ ಪ್ರಯೋಗಾಲಯಗಳು ಮೈಸೂರು,ಚಿತ್ರದುರ್ಗ,ಧಾರವಾಡ, ಬೆಳಗಾವಿ,ಬಳ್ಳಾರಿ ಮತ್ತು ಕಲಬುರಗಿಗಳಲ್ಲಿವೆ.

ಅಂತರ್ಜಲ ವಿಭಾಗ (ಗಣಿ ಮತ್ತು ಭೂವಿಜ್ಞಾನ ಇಲಾಖೆ)

ಅಂಕಿ-ಸಂಖ್ಯೆಗಳು

ಸ್ಟಾಟಿಸ್ಸ್ತಿಕಲ್ ಇನ್ಫರ್ಮೇಶನ್
1-04-2018 ಸ್ಕೀಮ್ ವೈಸ್ ರಿಪೋರ್ಟ್
ಡಿಸ್ಟ್. ಮತ್ತು ತಾಲೂಕ್ ರಿಪೋರ್ಟ್ 01-04-2018
01-04-2017 ಸ್ಕೀಮ್ವೈಸ್ ರಿಪೋರ್ಟ್
ತಾಲೂಕ್ ವೈಸ್ ರಿಪೋರ್ಟ್ 1-4-2017
ಯೋಜನಾತ್ಮಕ ವರದಿ 2015-16
ಯೋಜನೆ ಪ್ರಕಾರ ಕೆರೆಗಳು ಮತ್ತು ಇತರೇ ವರದಿಗಳು 2015-16
ವಾರ್ಷಿಕ ಆಡಳಿತ ವರದಿ 2015-16
ಅಂಕಿ-ಸಂಖ್ಯಾ ಮಾಹಿತಿ -2012
ಅಂಕಿ-ಸಂಖ್ಯಾ ಮಾಹಿತಿ ಜಲಮೂಲಗಳು ಮತ್ತು ಉಪ-ಮೂಲವಾರು- 2012

ಇತ್ತೀಚಿನ ನವೀಕರಣ​ : 07-09-2020 11:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಣ್ಣ ನೀರಾವರಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080