ಆರ್.ಎಫ್.ಡಿ

/ಆರ್.ಎಫ್.ಡಿ
ಆರ್.ಎಫ್.ಡಿ 2019-01-02T17:38:33+00:00

ದೂರದೃಷ್ಟಿ (ವಿಷನ್) 

ಜಲಮೂಲದ ಸಮರ್ಪಕ ಬಳಕೆ

ಆಶಯ (ಮಿಷನ್)

 • ಮೇಲ್ಮುಖ ನೀರಿನ ದೊರಕುವಿಕೆಯನ್ನು ಮೂಲಗಳ ಆಧಾರದಲ್ಲಿ ಮೌಲ್ಯಮಾಪನ ಮಾಡುವುದು
 •  ಯೋಜನೆಗಳ ಮೂಲಕ ಕೃಷಿ ಭೂಮಿ ರೂಪಿಸುವುದು.
 • ಇರುವ ಕೃಷಿಭೂಮಿಗಳನ್ನು ಸಣ್ಣ ನೀರಾವರಿ ಘಟಕಗಳನ್ನು ಪುನಶ್ಚೇತನ ಗೊಳಿಸುವ ಮೂಲಕ ಅಭಿವೃದ್ಧಿಪಡಿಸುವುದು.
 • ನೀರಿನ ಮೂಲಗಳಿರುವಲ್ಲಿ ಅಂತರ್ಜಲ ದೊರಕುವಿಕೆ ಬಗ್ಗೆ ಮೌಲ್ಯಮಾಪನ ಮಾಡುವುದು.
 •  ಜಲ ಮರುಪೂರಣದ ಮೂಲಕ ಅಂತರ್ಜಲ ಅಭಿವೃದ್ಧಿ ಮತ್ತು ಸಂರಕ್ಷಣೆ.
 • ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಜಲ ಮೂಲಗಳ ಸಂರಕ್ಷಣೆ.

ಉದ್ದೇಶಗಳು

 • ಕೆರೆಗಳು, ಇಂಗು ಕೆರೆಗಳು, ಅಣೆಕಟ್ಟುಗಳು, ದಂಡೆಗಳನ್ನು, ಪಿಕ್ ಅಪ್ಸ್, ಬ್ಯಾರಿಯೇಜ್ ಗಳು ಕಟ್ಟುವ ಮುಖಾಂತರ ಜಲಮೂಲವನ್ನು ಬಳಸಿಕೊಳ್ಳುವುದು.
 •  ಅಂತರ್ಜಲ ಮೂಲವನ್ನು ಪತ್ತೆಹಚ್ಚುವುದು.
 •  ಪುನಶ್ಚೇತನ ಕಾರ್ಯಗಳ ಮೂಲಕ ಕೆರೆಗಳ, ಕಾಲುವೆಗಳ ನೀರು ಸಂಗ್ರಹಣೆ ಮತ್ತು ಹರಿಯುವ ಸಾಮಥ್ಯವನ್ನು ಹೆಚ್ಚಿಸುವುದು.
 •  ನೆರೆಹಾವಳಿ ಇರುವ ಪ್ರದೇಶಗಳಲ್ಲಿ ಸೂಕ್ತ ಕಾರ್ಯಗಳ ಮೂಲಕ ಜಲಮೂಲಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವುದು.

 

ಕಾರ್ಯಗಳು

 •  ಸಮಗ್ರ ಯೋಜನಾ ವರದಿಯನ್ನು ತಯಾರಿಸಿ, ಆಡಳಿತಾತ್ಮಕ ಮಂಜೂರಾತಿ ಮತ್ತು ತಾಂತ್ರಿಕ ಅನುಮೋದನೆ ಪಡೆಯುವುದು.
 • ವಿವಿಧ ಯೋಜನೆಗಳಡಿಯಲ್ಲಿ ಸಣ್ಣ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.
 •  ಸಣ್ಣ ಅಣೆಕಟ್ಟುಗಳು, ತಡೆಗಳು, ಕಟ್ಟುಗಳನ್ನು ಕಟ್ಟುವ ಮೂಲಕ ಜಲಮರುಪೂರಣ ಘಟಕಗಳನ್ನು ಸ್ಥಾಪಿಸುವುದು.
 •  ಜಲ ಮೂಲಗಳ ಪುನಶ್ಚೇತನ ಮತ್ತು ನವೀಕರಣ.
 •  ಕೆರೆ ಪದ್ಧತಿಯನ್ನು ಸಂರಕ್ಷಿಸಲು ರಿಪೇರಿ ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು.
 •  ಸಮರ್ಪಕ ಪರಿವೀಕ್ಷಣಾ ಕಾರ್ಯದ ಮೂಲಕ ಗಡಿ ಗುರುತು ಮಾಡುವುದು, ಬೇಲಿ, ಟ್ರೆಂಚ್ ನಿರ್ಮಾಣ ಮತ್ತು ಅತಿಕ್ರಮಣ ತೆರವು ಮಾಡುವುದು.
 • ಅಂತರ್ಜಲದ ಗುಣಮಟ್ಟ ಮಟ್ಟ ಮತ್ತು ಪ್ರಮಾಣವನ್ನು ಅಂದಾಜು ಮಾಡಿ ಅಂತರ್ಜಲದ ಬಳಕೆಗೆ ಮತ್ತು ಸಂರಕ್ಷಣೆಗೆ ತಾಂತ್ರಿಕ ಸಲಹೆ ನೀಡುವುದು.
 •  ಗಿಡ ನೆಡುವುದು ಮತ್ತು ಹೂಳು ಸಂಗ್ರಹಕ್ಕೆ ಸೂಕ್ತ ಟ್ರಾಪ್‌ಗಳನ್ನು ನಿರ್ಮಿಸುವುದು.
 •  ಕರಾವಳಿ ಪ್ರದೇಶಗಳಲ್ಲಿ ಕೃಷಿ ಭೂಮಿಗೆ ಉಪ್ಪು ನೀರಿನ ಪ್ರವಾಹ ತಡೆಯಲು ಮತ್ತು ಭೂಮಿ ಕೊರೆತ ಉಂಟಾಗದಂತೆ ಸೂಕ್ತ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವುದು.

ಪ್ರಮುಖ ಉದ್ದೇಶಗಳು, ಯಶಸ್ವೀ ಕಾರ್ಯಸೂಚಕಗಳು ಮತ್ತು ಗುರಿಗಳು
ಯಶಸ್ವೀ ಕಾರ್ಯದ ಪ್ರಗತಿ ಸೂಚ್ಯಂಕಗಳು
ಯಶಸ್ಸು ಸೂಚಕಗಳು ವಿವರಣೆ ಮತ್ತು ವ್ಯಾಖ್ಯಾನ ಇತರ ಇಲಾಖೆಗಳಿಂದ ನಿರ್ದಿಷ್ಟವಾದ ಕಾರ್ಯಕ್ಷಮತೆ ಅಗತ್ಯತೆಗಳು ಹೊರಬರಲು / ಇಲಾಖೆ / ಸಚಿವಾಲಯದ ಪರಿಣಾಮ
ಆರ್ಎಫ್ಡಿಮೈನರ್ ಇರಿಗೈನಿಂಗ್ ಡಿಪಾರ್ಟ್ಮೆಂಟ್
ಸಾಧನೆ ಮೌಲ್ಯಮಾಪನ ವರದಿ