ಮುಖಪುಟ 2019-01-02T12:53:35+00:00

ಪರಿಚಯ

ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶವು 19.04 ಮಿಲಿಯನ್ ಹೆಕ್ಟೇರುಗಳಷ್ಟು ವಿಸ್ತೀರ್ಣ ಉಳ್ಳದ್ದಾಗಿದೆ.ಇದರಲ್ಲಿ 12.61 ಮಿಲಿಯನ್ ಹೆಕ್ಟೇರು ಪ್ರದೇಶವು ಕೃಷಿಯೋಗ್ಯವಾಗಿದ್ದು, ಇದರಲ್ಲಿ 61.00 ಲಕ್ಷ ಹೆಕ್ಟೇರು ಪ್ರದೇಶವು ನೀರಾವರಿ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಸಣ್ಣ ನೀರಾವರಿ ಯೋಜನೆಗಳು ಸುಮಾರು 10.00 ಲಕ್ಷ ಹೆಕ್ಟೇರು ವಿಸ್ತೀರ್ಣಕ್ಕೆ ಸಾಕಾಗುವಷ್ಟಿದೆ ಎಂದು ಅಂದಾಜಿಸಲಾಗಿದೆ.

 

ಇನ್ನೂ ಓದಿ

ವರದಿಗಳು

ಎಲ್ಲಾ ಅಂತರ್ಜಲ ಮತ್ತು ಮೇಲ್ಮುಖ ನೀರಾವರಿ ಯೋಜನೆಗಳು  ಅಂದರೆ ಹರಿಯುವ ಮತ್ತು ನೀರೆತ್ತುವ, ಕೃಷಿ ಭೂಮಿ 2000 ಹೆಕ್ಟೇರು ವ್ಯಾಪ್ತಿ ಪ್ರದೇಶ ಸಣ್ಣ ನೀರಾವರಿ ಯೋಜನಾ ವ್ಯಾಪ್ತಿಗೆ ಬರುತ್ತದೆ. ಸಣ್ಣ ನೀರಾವರಿ ಯೋಜನೆಗಳು ಕೃಷಿಕರಿಗೆ ಸಮಯ ಸಂದರ್ಭಾನುಸಾರವಾಗಿ ನೀರು ಪೂರೈಸಿ, ಕೃಷಿ ಉತ್ಪನ್ನ ಹೆಚ್ಚಳವಾಗುವಂತೆ ಮತ್ತು ಈ ಮೂಲಕ ಬೆಳೆಗಾರರ ಅವಶ್ಯಕತೆಗಳನ್ನು ಸಮಗ್ರವಾಗಿ ಪೂರೈಸುವುದಾಗಿದೆ.

 

ಇನ್ನೂ ಓದಿ

ಟೆಂಡರ್ ಗಳು ಮತ್ತು ಸೂಚನೆಗಳು

ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಆಡಳಿತದಲ್ಲಿ ‘ಇ- ಪ್ರೊಕ್ಯೂರ್ಮೆಂಟ್’ ಅನ್ನು ಜಾರಿಗೊಳಿಸಲಾಗಿದೆ. ಎಲ್ಲಾ ಟೆಂಡರಿಂಗ್ ಪ್ರಕ್ರಿಯೆಗಳು ಆನ್ಲೈನ್ ​​ಮೂಲಕ ಮಾಡಲ್ಪಡುತ್ತವೆ ಮತ್ತು ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಭಾಗವಹಿಸಬಹುದು.

ಇನ್ನೂ ಓದಿ

ಉದ್ದೇಶಗಳು

 • ಯಾವುದೇ ಹೊಸ ಯೋಜನೆಯನ್ನು ಕೈಗೊಳ್ಳಬೇಕಾದರೆ ಸರ್ವೆ ಕೆಲಸವನ್ನು ನಡೆಸಲಾಗುತ್ತದೆ. ಸರ್ವೆ ಫಲಿತಾಂಶಗಳನ್ನು ಆಧರಿಸಿ, ಅಂದಾಜುಗಳನ್ನು ತಯಾರಿಸಲಾಗುತ್ತದೆ. ಪರಿಶೀಲನೆ, ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಅನುಮೋದನೆಯನ್ನು ಸೂಕ್ತ ಅಧಿಕಾರದಿಂದ ಪಡೆದುಕೊಳ್ಳಲಾಗುತ್ತದೆ.

 • ಕರ್ನಾಟಕ ನೀರಾವರಿ ಕಾಯಿದೆಯಡಿಯಲ್ಲಿ ನಿಯಮಗಳನ್ನು ಜಾರಿಗೆ ತರಲಾಗುವುದು.·

 • ಸಣ್ಣ ನೀರಾವರಿ ಯೋಜನೆಗಳಾದ ಟ್ಯಾಂಕ್ ಗಳು, ಅಣೆಕಟ್ಟುಗಳು, ಪಿಕಪ್ ಗಳು, ಲಿಫ್ಟ್ ನೀರಾವರಿ ಯೋಜನೆಗಳು ಮತ್ತು ಬ್ಯಾರೇಜುಗಳು ನಿರ್ಮಾಣ, ಇದಕ್ಕೆ ಬೇಕಾದ ಹಣಕಾಸಿನ ನೆರವನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದ ಮೂಲಕ ಮತ್ತು ಆರ್ಥಿಕ ನೆರವನ್ನು ನಬಾರ್ಡ್ ನ ಮೂಲಕ ಪಡೆಯಲಾಗುವುದು.·

 • ಇಂಗು ಕೆರೆಗಳ ಮೂಲಕ ಅಂತರ್ಜಲದ ಮಟ್ಟವನ್ನು ಮರುಸ್ಥಾಪಿಸುವುದು.·
 • ರೈಲ್ವೆ ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ರೈಲ್ವೇ ಮಾರ್ಗಗಳ ಸುರಕ್ಷಿತ ರಕ್ಷಣೆಯನ್ನು ಖಾತರಿಪಡಿಸಲು, ರೈಲ್ವೇಯನ್ನು ಬಾಧಿಸುವ ಟ್ಯಾಂಕ್ ಗಳನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಕರಿಸುವುದು.·

 • ನದಿಯ ದಡ ಸಂರಕ್ಷಣಾ ಕಾರ್ಯಗಳು.·

 • ಏತ ನೀರಾವರಿ ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆ.
 • ಕರಾವಳಿ ಪ್ರದೇಶದಲ್ಲಿರುವ ಕೃಷಿ ಭೂಮಿಗಳಿಗೆ ಉಪ್ಪು ನೀರಿನಿಂದ ಸಂರಕ್ಷಣೆ.
 • ನೀರು ಬಳಕೆದಾರರ ಸಂಘದವರಿಗೆ, ಪೂರ್ಣಗೊಂಡ ಟ್ಯಾಂಕ್ ಗಳ ನಿರ್ವಹಣೆ ಮತ್ತು ರಿಪೇರಿಯ ಉದ್ದೇಶಕ್ಕಾಗಿ ಹಸ್ತಾಂತರ. (ಸಮುದಾಯ ಆಧಾರಿತ ಯೋಜನೆ).

 • ನೀರಿನ ದರವನ್ನು ಕಾಲಕಾಲಕ್ಕೆ ಸರಿಪಡಿಸಲು ನೀರಾವರಿ ಮತ್ತು ಕಂದಾಯ ಇಲಾಖೆಯ ಜಂಟಿ ಪರಿಶೀಲನೆ ನಡೆಯುತ್ತದೆ. ಕಂದಾಯ ಸಂಗ್ರಹ ಕಾರ್ಯವನ್ನು ಕಂದಾಯ ತೆರಿಗೆ ಇಲಾಖೆ ತೆಗೆದುಕೊಂಡಿದೆ.

 • ಸಣ್ಣ ನೀರಾವರಿ ಕಾರ್ಯಗಳಿಗೆ ಸಂಬಂಧಿಸಿದ ಅಂಕಿಅಂಶಗಳ ನಿರ್ವಹಣೆ.
 • ಸಾಮಾನ್ಯ ಆಡಳಿತದ ನಿರ್ವಹಣೆ, ಅಧೀನ ಕಚೇರಿಗಳ ಚಟುವಟಿಕೆಗಳ ಪರಿಶೀಲನೆ.

ಗ್ಯಾಲರಿ

ಗ್ಯಾಲರಿಗೆ ಭೇಟಿ ನೀಡಿ.

 

ಶ್ರೀ ಸಿ.ಎಸ್ ಪುಟ್ಟರಾಜು,
ಸಚಿವರು,
ಸಣ್ಣ ನೀರಾವರಿ ಮತ್ತು ಅಂತರ್ಜಲ 
ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ

ಶ್ರೀ. ಸಿ. ಮೃತ್ಯುಂಜಯ ಸ್ವಾಮಿ, ಕೆ.ಇ.ಎಸ್,
ಕರ್ನಾಟಕ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ. ಕರ್ನಾಟಕ ಸರ್ಕಾರ